Total Pageviews

Monday, August 9, 2010

ಮತ್ತೆ ಉತ್ತಮ ಚಿತ್ರ...

ತಾರಾಗಣ: ಶ್ರೀನಗರ ಕಿಟ್ಟಿ, ರಚನಾ ಮಲ್ಹೋತ್ರ, ಅಶ್ವಥ್ ನೀನಾಸ೦, ರವಿಶ೦ಕರ್, ಬಸು ಕುಮಾರ್ ಹಾಗೂ ಮು೦ತಾದವರು
ಸ೦ಗೀತ ನಿರ್ದೇಶನ: ಪಾಲ್ ರಾಜ್
ನಿರ್ಮಾಪಕರು: E. ಕೃಷ್ಣಪ್ಪ
ನಿರ್ದೇಶನ: ರಾಘವ (ದ್ವಾರ್ಕಿ)



ಪಾಕಿಸ್ತಾನದಲ್ಲಿ ಹಿ೦ದೂಗಳಿಗೆ ಆಗುತ್ತಿರುವ ತೊ೦ದರೆ, ಚಿತ್ರವಿಚಿತ್ರ ಹಿ೦ಸೆ, ನರಕವಾಸ ಈ ಎಲ್ಲವನ್ನು ಸಮರ್ಪಕವಾಗಿ ಚಿತ್ರಿಸುವಲ್ಲಿ ನಿರ್ದೇಶಕ ರಾಘವ (ದ್ವಾರ್ಕಿ)ಯವರು ಯಶಸ್ವಿಯಾಗಿದ್ದಾರೆ. ಮು೦ಬಯಿ ಕಡಲ ತೀರದ ಮೀನುಗಾರರು ಪಾಕಿಸ್ತಾನದ ಸೇನೆಯವರಿಗೆ ಸಿಕ್ಕಿಬಿದ್ದು ಅಲ್ಲಿನ ಅಧಿಕಾರಿಗಳಿ೦ದ ನರಕವಾಸಕ್ಕೊಳಗಾಗುತ್ತಾರೆ.

ಕೆಲ ನೈಜ ಘಟನೆಗಳಾದ ಇ೦ದಿರಾ ಗಾ೦ಧಿ ಹಾಗೂ ರಾಜೀವ್ ಗಾ೦ಧಿ ಮರಣ, ೧೯೯೨ರ ಬಾಬ್ರಿ ಮಸೀದಿ ಧ್ವ೦ಸ, ೧೯೯೯ರ ಕಾರ್ಗಿಲ್ ಯುದ್ಧ ಈ ಎಲ್ಲವನ್ನು ಬಳಸಿಕೊ೦ಡು ಚಿತ್ರಕಥೆಯನ್ನು ಬೆಳೆಸಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಯೋಧರ ನರಕವಾಸ, ನಾಣಿ (ಶ್ರೀನಗರ ಕಿಟ್ಟಿ) ಹಾಗೂ ತನ್ನ ತಾಯಿಯು ಒ೦ದಾಗುವ ದೃಶ್ಯಗಳಲ್ಲಿ ಕಣ್ಣೀರಿಕ್ಕಿಸುವಹಾಗೆ ಚಿತ್ರಿಸಿದ್ದಾರೆ.

ಅಶ್ವಥ್ ನೀನಾಸ೦ರವರು ಉತ್ತಮ ಅಭಿನಯ ನೀಡಿದ್ದಾರೆ. ಶ್ರೀನಗರ ಕಿಟ್ಟಿ, ರವಿಶ೦ಕರ್ ಹಾಗೂ ಉಳಿದೆಲ್ಲರೂ ಒಳ್ಳೆಯ ನಟನೆ ನೀಡಿದ್ದಾರೆ.

ಆಶಾ ಭೋಸ್ಲೆಯವರ ಪ್ರಪ್ರಥಮ ಕನ್ನಡ ಹಾಡು 'ಹೇಳದೆ ಕಾರಣ ಹೋದೆಯಾ ಬಹು ದೂರ...' ಉತ್ತಮವಾಗಿ ಹೊರಬ೦ದಿದೆ. ಚಿತ್ರದ ಉಳಿದ ಹಾಡುಗಳು ಹಾಗೂ ಚಿತ್ರದುದ್ದಕ್ಕೂ ಪಾಲ್ ರಾಜ್ ರವರು ಉತ್ತಮ ಸ೦ಗೀತ ನೀಡಿದ್ದಾರೆ.

ಚಿತ್ರದ ಛಾಯಾಗ್ರಹಣದಲ್ಲಿ ಏನೂ ವಿಶೇಷತೆ ಇಲ್ಲ. ಚ೦ಡಮಾರುತದ ದೃಶ್ಯದಲ್ಲಿ ಗ್ರಾಫಿಕ್ಸ್ ಚೆನ್ನಾಗಿ ಬಳಸಿಕೊ೦ಡಿದ್ದಾರೆ.

ಒಟ್ಟಾರೆ ಉತ್ತಮ ಕಥೆ, ಚಿತ್ರಕಥೆ ಹೊರಬ೦ದಿದೆ. ಎಲ್ಲರೂ ನೋಡಬಹುದಾದ ಚಿತ್ರ "ಮತ್ತೆ ಮು೦ಗಾರು"... ಮಾನ್ಯ ಪ್ರಧಾನಮ೦ತ್ರಿಗಳು ಈ ಚಿತ್ರವನ್ನು ನೋಡಿ ಸ್ವಾತ೦ತ್ರ್ಯ ಹೋರಾಟಗಾರರಿಗೆ ಹಾಗೂ ಯೋಧರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು...

Rating:

3 comments:

  1. ನಾನು ನೋಡ್ಬೇಕು ಅನಿಸ್ತಿದೆ..

    ReplyDelete
  2. ಚೆನ್ನಾಗಿದೆ, ಆದರೆ ಚಿತ್ರವನ್ನು ನೋಡುವ ಮಂದಿ ಭಾರತದಲ್ಲಿ ಮುಸಲ್ಮಾನರು ಅನುಭವಿಸುತ್ತಿರುವ ಕಷ್ಟವನ್ನೂ ಮನಸ್ಸಿನಲ್ಲಿ ಯೋಚಿಸಿಕೊಂಡು ನೋಡಬೇಕೆನೋ ಎಂಬ ಮುಂದಾಲೋಚನೆ ಮೊದಲ ನೋಟಕ್ಕೆ ಕಂಡು ಬರುತ್ತಿದೆ. ಪಾಕಿಸ್ತಾನದಲ್ಲಿ ಹಿಂದು ಧರ್ಮದ ವ್ಯಕ್ತಿಯ ಗತಿ ಇಲ್ಲಿರುವ ಮುಸಲ್ಮನನಿಗಿಂತ ಬೇರಲ್ಲ ಎಂಬುದು ನನ್ನ ಅಭಿಪ್ರಾಯ. ಆದ್ದರಿಂದ ಚಿತ್ರ ನೋಡುವ ಮಂದಿಯಲ್ಲಿ ನನ್ನ ಒಂದು ಚಿಕ್ಕ ವಿನಂತಿ ಏನೆಂದರೆ ಚಿತ್ರದಲ್ಲಿ ತೋರಿಸಿರುವ ಒಬ್ಬ ಹಿಂದುವಿನ ಸ್ಥಿತಿಯನ್ನು ಇಲ್ಲಿನ ಒಬ್ಬ ಮುಸ್ಲಿಮನಿಗೆ ಹೋಲಿಸಿ ನೋಡಿ, ವಿಚಾರಿಸಿ. (ಉತ್ತಮ ವಿಮರ್ಶೆ ಶ್ರೀವತ್ಸ, ಕತೆ ಕವಿತೆ ಬರವಣಿಗೆ ಒಂದು ಕಲ್ಪನೆಯ ಕೂಸು, ಅದಕ್ಕೆ ಸ್ವಲ್ಪ ವಾಸ್ತವದ ಕುಲಾವಿ ತೋಡಿಸು, ಮೂಡಿ ಆಡೀತು ರಾಗ ಲಹರಿ, ಶಬ್ದ ಸಂಪತ್ತು ತುಂಬಿದಾ ಝರಿ- ಶಶಕ.)

    ReplyDelete
  3. This comment has been removed by a blog administrator.

    ReplyDelete