Total Pageviews

Thursday, July 1, 2010

ವೈದ್ಯರ ದಿನಾಚರಣೆ



ಎಲ್ಲರ ಆರೋಗ್ಯ ತಪಾಸಣೆ ಮಾಡಿ ದೈವ ಎನ್ನಿಸಿಕೊಳ್ಳುವವನು ವೈದ್ಯ. ಇಂದು (ಜುಲೈ 1) ವೈದ್ಯರ ದಿನಾಚರಣೆಯನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ.

ಭಾರತದಲ್ಲಿ ಡಾ. ಭಿದನ್ ಚಂದ್ರ ರಾಯ್ ಅವರ ನೆನಪಿನಲ್ಲಿ ಜುಲೈ ೧ರಂದು ವೈದ್ಯರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈತ ವೈದ್ಯಕೀಯ ರಂಗದಲ್ಲಿ ಅಪಾರವಾದ ಸಾಧನೆ ಮಾಡಿದವರು.

೧೮೮೨ರ ಜುಲೈ ೧ ರಂದು ಇವರ ಜನ್ಮದಿನವಾದರೆ, ೧೯೬೨ರ ಜುಲೈ ೧ ರಂದು ದೈವಾದೀನರಾದರು. ಈತನ ಜನನ ಹಾಗೂ ಮರಣ ಎರಡೂ ಜುಲೈ ೧ ರಂದೇ.

ಏಕ ಕಾಲದಲ್ಲೇ F.R.C.S. (Fellowship of the Royal College of Surgeon) ಹಾಗೂ M.R.C.P. (Member of the Royal College of Physicians) ಎರಡನ್ನೂ ಮುಗಿಸಿದ ಕೆಲವೇ ಮಹನೀಯರಲ್ಲಿ ಇವರೂ ಒಬ್ಬರು.

ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ "ಭಾರತ ರತ್ನ" ಪ್ರಶಸ್ತಿಯನ್ನು ೪ನೇ ಫೆಬ್ರವರಿ ೧೯೬೧ ರಂದು ಕೊಡಮಾಲಾಗಿತ್ತು.

ಇವರು ವೈದ್ಯಕೀಯದಲ್ಲಷ್ಟೇ ಅಲ್ಲದೆ ಇತರ ಸಾಧನೆಗಳೂ ಮಾಡಿದ್ದಾರೆ. ತಮ್ಮ ಜನ್ಮಸ್ಥಳವಾದ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಸಮಾಜ ಸೇವೆಯೂ ಮಾಡಿದ್ದರು. ದೇಶದ ಸ್ವಾತಂತ್ರ್ಯ ಹೋರಾಟ ಸಮಯದಲ್ಲಿ ದೇಶಕ್ಕೋಸ್ಕರ ಹೋರಾಡಲೂ ಸೈ ಎಂದಿದ್ದರು.

ರಾಜಕೀಯದಲ್ಲೂ ಡಾ. ಬಿ. ಸಿ. ರಾಯ್ ರವರದು ಮೇಲುಗೈ. ೧೪ ಜನವರಿ ೧೯೪೮ ರಿಂದ ೧ ಜುಲೈ ೧೯೬೨ (ನಿಧನ) ವರೆಗೂ ಪಶ್ಚಿಮ ಬಂಗಾಳದ ಮಾನ್ಯ ಮುಖ್ಯಮಂತ್ರಿಗಳಾಗಿದ್ದರು.

ಇಂತಹ ಒಬ್ಬ ಅತ್ತ್ಯುನ್ನತ ವೈದ್ಯನ ನೆನೆಪಿನಲ್ಲಿ ತನ್ನ ಜನನ ಹಾಗೂ ನಿಧನದ ದಿನವೂ ಆದ ಜುಲೈ ೧ ರಂದು ನಮ್ಮ ದೇಶದೆಲ್ಲೆಡೆ "ವೈದ್ಯರ ದಿನಾಚರಣೆ"ಯನ್ನು ಆಚರಿಸಲಾಗುತ್ತದೆ.

ಎಲ್ಲಾ ವೈದ್ಯರಿಗೂ ಶುಭವಾಗಲಿ
ವೈದ್ಯೋ ನಾರಾಯಣೋ ಹರಿಃ