Total Pageviews

Tuesday, July 20, 2010

'ಮಾಯೆ'ಯ ಎರಡು ನಾಟಕಗಳು ಪುಸ್ತಕ ಯಶಸ್ವಿಯಾಗಿ ಬಿಡುಗಡೆಯಾಯಿತು

ಪ್ರಸಿದ್ಧ ನಾಟಕಕಾರ ಡಿ. ಕೆ. ಚೌಟರ ಎರಡು ತುಳು ನಾಟಕಗಳ ಕನ್ನಡಾನುವಾದದ ಪುಸ್ತಕ 'ಮಾಯೆ'ಯ ಎರಡು ನಾಟಕಗಳು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಜುಲೈ ೧೬ ರಂದು ಯಶಸ್ವಿಯಾಗಿ ಬಿಡುಗಡೆಯಾಯಿತು.


ಸಮಾರಂಭದಲ್ಲಿ ಶ್ರೀಯುತ ಎಂ. ಕೆ. ಭಾಸ್ಕರ್ ರಾವ್, ಶ್ರೀಯುತ ಸುರೇಶ್ ಆನಗಳ್ಳಿ, ನಾಟಕಗಳ ಮೂಲ ಕರ್ತೃ ಶ್ರೀಯುತ ಡಿ. ಕೆ. ಚೌಟ, ಕನ್ನಡ ಅನುವಾದಕರಾದ ಶ್ರೀಯುತ ಕೇಶವ್ ಕುಡ್ಲ, ಹಾಗೂ ರಂಗ ಕರ್ಮಿಗಳಾದ ಶ್ರೀಯುತ ಕೃಷ್ಣಮೂರ್ತಿ ಕವತ್ತಾರ್ ರವರು ಉಪಸ್ಥಿತರಿದ್ದರು. ಪುಸ್ತಕ ಬಿಡುಗಡೆ ಸಮಾರಂಭವು ಈ ಎಲ್ಲ ಗಣ್ಯ ವ್ಯಕ್ತಿಗಳಿಂದ ಯಶಸ್ವಿಯಾಯಿತು.

ಶ್ರೀಯುತ ಎಂ. ಕೆ. ಭಾಸ್ಕರ್ ರಾವ್ ರವರು ಎರಡೂ ನಾಟಕಗಳ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸುವ ಮೂಲಕ ಪ್ರವೇಶವನ್ನು ಒದಗಿಸಿದರು. ಸುರೇಶ್ ಆನಗಳ್ಳಿಯವರು ಡಿ. ಕೆ. ಚೌಟರ ಬಗ್ಗೆ ನಾಲ್ಕು ಹಿತನುಡಿಗಳನ್ನಾಡಿದರು. ಅನುವಾದಿಸಲು ಅವಕಾಶ ಕಲ್ಪಿಸಿದ ಡಿ. ಕೆ. ಚೌಟರವರಿಗೆ ತಮ್ಮ ಅಭಿನಂದನೆಗಳನ್ನು ತಿಳಿಸಿ, ತುಳು ಭಾಷೆ ಕಲಿಯುವುದಕ್ಕೂ ಒಂದು ಹೆಜ್ಜೆಯಾಯಿತು ಎಂದು ತಮ್ಮ ಅನುವಾದದ ಅನುಭವಗಳನ್ನು ಕೇಶವ್ ಕುಡ್ಲರವರು ಹಂಚಿಕೊಂಡರು.

ಪುಸ್ತಕ ಬಿಡುಗಡೆ ಸಮಾರಂಭದ ನಂತರ ಕೃಷ್ಣಮೂರ್ತಿ ಕವತ್ತಾರ್ ನಿರ್ದೇಶನದ ರಂಗ ಪ್ರಯೋಗ 'ಉರಿ ಉಷ್ಣದ ಮಾಯೆ' ನಾಟಕ ಪ್ರದರ್ಶನಗೊಂಡಿತು.

ನಾಟಕ ಪ್ರಯೋಗವು ಕನ್ನಡ ಮತ್ತು ತುಳು ರಂಗ ಭೂಮಿಯಲ್ಲಿ ಹೆಸರಾಗಿರುವ ರಂಗ ತಂಡ 'ರಂಗಾವತಾರ'ದಿಂದ ಹೊರಹೊಮ್ಮಿತು.

ಜಾತಿ - ಧರ್ಮ ಮತ್ತು ಬದಲಾದ ಈ ಕಾಲದ ಕಥೆ ಬಗೆಗಿನ ವಿಷಯಗಳು ಈ ನಾಟಕದಲ್ಲಿ ಒಳಗೊಂಡಿದೆ. ಎಲ್ಲರೂ ನೋಡಲೇಬೇಕಾದ ನಾಟಕ "ಉರಿ ಉಷ್ಣದ ಮಾಯೆ"...

No comments:

Post a Comment