Total Pageviews

Wednesday, June 20, 2012

ಅದ್ದೂರಿ - ಚಿತ್ರ ವಿಮರ್ಶೆ

ತಾರಾಗಣ: ಧ್ರುವ ಸರ್ಜಾ, ರಾಧಿಕಾ ಪಂಡಿತ್...
ಸಂಗೀತ: ವಿ ಹರಿಕೃಷ್ಣ
ನಿರ್ಮಾಣ: ಸಿ ಎಂ ಆರ್ ಶಂಕರ್ ರೆಡ್ಡಿ
ನಿರ್ದೇಶನ: ಎ ಪಿ ಅರ್ಜುನ್




ಲವ್ ಬ್ರೇಕ್ ಅಪ್ ನಂತರದ ನಾಯಕ ನಾಯಕಿಯ ಏಳು ದಿನಗಳ ಕತೆಯೇ ಅದ್ದೂರಿ ಚಿತ್ರ. ಅಚ್ಚು - ರಚ್ಚು ಲವ್ ಸ್ಟೋರಿ ಎಂಬ ಅಡಿಬರಹ ಯಾಕೆ ಹಾಗೂ ಏಳು ದಿನಗಳ ಕಥೆ ಏನು ಅನ್ನೋದನ್ನ ಸಿನಿಮಾದಲ್ಲಿ ನೋಡಿ. ಒಂದು ಸುಮಾರಾಗಿರೋ ಲವ್ ಸ್ಟೋರಿಯೊಂದಿಗೆ ಮತ್ತೆ ಅರ್ಜುನ್ ಗಾಂಧಿನಗರಕ್ಕೆ ಬಂದಿದ್ದಾರೆ. ಕಥೆಯಲ್ಲಿ ಏನು ವಿಶೇಷತೆ ಇಲ್ಲದಿದ್ದರು ಹಾಡುಗಳು ಹಾಗೂ ಫೈಟ್ ಗಳಲ್ಲಿ ಒಂದಿಷ್ಟು ಕಿಕ್ ಇದೆ. ಸಿನಿಮ ನೋಡುತ್ತಿರುವಾಗ ಆಗಾಗ ಎಲ್ಲೋ ಒಂದೆರಡು ಕಡೆ ಯಾವುದೇ ಹಳೆ ಸಿನಿಮಾಗಳ ನೆನಪಾಗದಿದ್ದರೆ ಸಾಕು. ಚಿತ್ರದ ಕಥೆಗೂ ಚಿತ್ರದ ಟೈಟಲ್ ಗೂ ಇರುವ ಸಂಬಂಧ ಮಾತ್ರ ದಯವಿಟ್ಟು ಕೇಳಬೇಡಿ.

ನಾಯಕ ಧ್ರುವ ಸರ್ಜಾ ನಟನೆಯಿಂದ ಕೆಲವು ಕಡೆ ಚಿತ್ರ ಬೋರಾಗಬಹುದು. ಧ್ರುವ ಸರ್ಜಾ ನಟನೆಯಲ್ಲಿ ತುಂಬಾ ಪಳಗಬೇಕು ಅನಿಸುತ್ತದೆ. ರಾಧಿಕಾ ಪಂಡಿತ್ ನಟನೆ ಮಾಮೂಲಿನಂತೆ ಇದೆ. ಅವರದೇ ಧ್ವನಿಯನ್ನು ಕೇಳಿಸಿಕೊಳ್ಳುವುದು ಕಷ್ಟದ ಮಾತೇನಲ್ಲ ಬಿಡಿ. ಇಬ್ಬರ ಕೆಮಿಸ್ಟ್ರಿ ಚೆನ್ನಾಗೆ ವರ್ಕ್ ಔಟ್ ಆಗಿದೆ. ಒಳ್ಳೆ ಜೋಡಿ. ಹರಿಕೃಷ್ಣ ಸಂಗೀತದಲ್ಲಿ ತಮ್ಮ ಎಂದಿನ ಸ್ಟೈಲ್ ಗೆ ಎಲ್ಲೂ ಧಕ್ಕೆಯಾಗಿಲ್ಲ. ಅಮಾಟೇ ಹಾಡು ಗಾಂಧಿನಗರದ ಪಡ್ಡೆ ಹುಡುಗರ ಮನಸೂರೆಗೊಳಿಸಿದೆ. ಉಳಿದ ಹಾಡುಗಳು ಸಹ ಚೆನ್ನಾಗಿದೆ. ಪ್ರಸಾಧನ ಬಹಳ ಕಳಪೆಯಾಗಿದೆ ಎಂದರೆ ತಪ್ಪಾಗಲಾರದು. ಅಲ್ಲಲ್ಲಿ ಪ್ಯಾಚ್ ಗಳನ್ನು ಗಮನಿಸಿದರೆ ಗೊತ್ತಾಗುತ್ತದೆ. ಛಾಯಾಗ್ರಹಣದಲ್ಲಿ ಹೇಳಿಕೊಳ್ಳುವಂಥಾ ಉತ್ತಮ ಪ್ರಯತ್ನ ಇಲ್ಲ ಅಂತಲೇ ಅನಿಸುತ್ತದೆ. ಒಟ್ಟಾರೆ ಹೇಳೋದಾದರೆ ಸಿನಿಮಾದಲ್ಲಿ ಹಾಡುಗಳು ಹಾಗು ಸಾಹಾಸ ದೃಶ್ಯಗಳ ಹೊರಾತಾಗಿ ಉತ್ತಮವಾದ ಅಂಶ ಏನೂ ಇಲ್ಲ.


No comments:

Post a Comment